"ಕೊಪ್ಪರಿಗೆಯ ಬೆಲ್ಲ" - ಪ್ರಾಸ್ತವಿಕೆ

childhood days in malenadu

ಕೊಪ್ಪರಿಗೆಯ ಬೆಲ್ಲ

ಸಂಪದವೆನಿಸಿತು ಬಣ್ಣಿಸಲಳವು ಕವನದಲಿ?

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ

ಮಳೆಯಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ

ದೃಶ್ಯವೈವಿದ್ಯಮಂಮ್ ರಚಿಸಿ ನೀಂ ಭುವನದಲಿ

ಸ್ವರ್ಗವಾಗಿಹೆ ನನಗೆ!

                                                 - ಕುವೆಂಪು

 ಪ್ರಾಸ್ತವಿಕೆ

     ಕವಿ ಶೈಲದಲಿ ಪುಟ್ಟಪ್ಪನಿಗೆ ಕಂಡ ಸ್ವರ್ಗ ನನಗೆ ನನ್ನ ಸಮಗೋಡಿನಲ್ಲಿ ಕಾಣುತ್ತದೆ. ಕೊಡಚಾದ್ರಿಯ ತಪ್ಪಲಲಿ, ಶರಾವತಿಯ ಸೆರೆಗಿನಲಿ, ತೆಂಗುಗಳ ನೆರಳಿನಲಿ ಬಚ್ಚಿಕೊಂಡು, ಅಕೇಶಿಯಾ ಗಾಳಿಯ ಸದ್ದಿನ ಮೂಲಕ ತನ್ನ ಇರುವಿಕೆಯನ್ನು ಉಸುರುತ್ತಿರುವ, ಚಿತ್ತಾಕರ್ಷಕವಾದ ಪಕ್ಷಿಗಳು, ಕೀಟಗಳಿಗೆ ಆಸರೆಯಾಗಿರುವ ತವರು ಆ ನನ್ನ ಮಲೆನಾಡು. ಅಲ್ಲಿ ಹೋಗುವ ಯೋಚನೆಯಿಂದಲೇ ನನ್ನ ತನುಮನ ಅರಳುತ್ತದೆ.

     ಊಸರವಳ್ಳಿಯು ತನ್ನ ಬಣ್ಣ ಬದಲಿಸುವ ರೀತಿ ಮಲೆನಾಡು; ಮಾಗಿಯಲಿ ಕೊರೆಯುವಚಳಿಯು, ವಸಂತದಲಿ ಚಿಗುರು, ಬೇಸಿಗೆಯಲ್ಲಿ ಹಲಸಿನ ಹಪ್ಪಳ ಒಣಗುವಷ್ಟು ಬಿಸಿಲು ಮತ್ತು ಮಳೆಗಾಲದಲ್ಲಿ ಅಡುಗೆ ಮನೆಯ ನೊಣದ ಗೂಯ್! ಗೂಯ್! ಸದ್ದೂ ಕೆಳಿಸದ ಆರ್ಭಟದಿಂದ ತನ್ನ ರುದ್ರರಮಣೀಯತೆಯನ್ನು ಬಿಂಬಿಸುತ್ತವೆ.

     ಇಂತಹ ಮನೋಲ್ಲಾಸವನ್ನುಂಟು ಮಾಡುವ ವಾತಾವರಣ ಯಾರಿಗೆ ತಾನೆ ಬೇಡ? ಇಲ್ಲಿನ ಪ್ರಕೃತಿ ಎಷ್ಟು ಸುಂದರವೋ, ಜನರು ಅಷ್ಟೇ ನಿಪುಣರು. ತಮ್ಮ ನಡವಳಿಕೆಯಲ್ಲಿ ಗೌರವವನ್ನು, ಭಾಷೆಯಲ್ಲಿ ಪ್ರೀತಿ ಮಮಕಾರವನ್ನೂ, ಕಾಯಕದಲ್ಲಿ ಕೈಲಾಸವನ್ನೂ ತೋರಿಸಿಕೊಡುವವರು ಎಂತಹ ಕುಂಭದ್ರೋಣ ಮಳೆಯನ್ನೂ ಲೆಕ್ಕಿಸದೆ, ತಲೆಗೊಂದು ಕೊಪ್ಪೆ ತೊಟ್ಟು, ಒಂದು ಮಳೆ ಒಂದು ಹೊಳದ ಮಧ್ಯೆ ಮೋಡಗಳ ನಡುವೆ ಇಣುಕುವ ಸೂರ್ಯ ರಶ್ಮಿಯನ್ನೇ ನೋಡಿ ಖುಷಿಪಟ್ಟು, ಎಂತಹ ಹವಾಮಾನ ವೈಪರೀತ್ಯವನ್ನೂ ತಡೆದುಕೊಳ್ಳುವ ಚೇತನವನ್ನು ಇಟ್ಟುಕೊಂಡ ಗಟ್ಟಿಗರು ಈ ನಮ್ಮ ಮಲೆನಾಡಿಗರು.

Comments

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "