"ಕೊಪ್ಪರಿಗೆಯ ಬೆಲ್ಲ" (17) - ಅಯ್ಯೋ!...ರಜೆ ಮುಗೀತು...

                                  ಅಯ್ಯೋ!...ರಜೆ ಮುಗೀತು...




      ಕಣ್ಣರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಕ್ರಿಸ್ಮಸ್ ರಜೆ ಮುಗಿದಿತ್ತು. ಇಷ್ಟು ಬೇಗ ಸಮಯ ಕಳೆದದ್ದು ಬೇಜಾರೆನಿಸಿದರೂ, ಒಂದು ನಿಮಿಷವನ್ನೂ ವ್ಯರ್ಥಮಾಡದೆ ಕಳೆದ ಒಂದೊಂದು ದಿನವೂ ನಮಗೆ ಅಭೂತಪೂರ್ವವಾದ ಆನಂದವನ್ನು ಕೊಟ್ಟಿದ್ದರಿಂದ, ಈ ರಜೆಯು ಒಂದು ರೀತಿಯ ಸಾರ್ಥಕತೆಯನ್ನು ಕೊಟ್ಟಿತ್ತು. ನಮ್ಮ ಕಮ್ಫರ್ಟ್ ಝೋನ್ ಅನ್ನು ದಾಟಿ, ಹಿಂದೆ ಕೈಗೊಳ್ಳದ ಅಡ್ವೆಂಚರ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೆವು. ಅದಕ್ಕೆ ಕಳಶವಿಟ್ಟಂತೆ ಆದ ಹುಲಿಯ ಹೆಜ್ಜೆಯ ದರ್ಶನ, "ಎಲೆ ಮಾನವ ಪ್ರಕೃತಿಯ ಮುಂದೆ ನೀನು ನಶ್ವರ" ಎಂದು ತನ್ನದೇ ರೀತಿಯಲ್ಲಿ ಪ್ರದರ್ಶಿಸಿದಂತಿತ್ತು. ಆ ಘಳಿಗೆಯಲ್ಲಿ, "ಇದೇ ನಮ್ಮ ಜೀವನದ ಕೊನೆಯ ಕ್ರಿಸ್ಮಸ್ ರಜೆ" ಎಂದು ಈ ಪುಕ್ಕಲ ಮನಸ್ಸು ನಿರಾಯಾಸವಾಗಿ ಒಪ್ಪಿಕೊಂಡಿದ್ದ ನೆನೆದರೆ ಮೈ ರೋಮಾಂಚನವಾಗದೆ ಇರಲಾರದು. ಹೇಗೆ ಕಾಡು ಮೇಡು ಸಂಚಾರಿಯಾಗಿ, ತೋಟ ಗದ್ದೆಗಳಲ್ಲಿ ಓಟಗಾರರಾಗಿ, ಹಣ್ಣಿನ ಮರಗಳ ಭಕ್ಷಕರಾಗಿ, ಗುಡ್ಡಕ್ಕೆ ಬೆಂಕಿ ಇಟ್ಟ ಕೊಳ್ಳಿ ದೆವ್ವವಾಗಿ ಮೆರೆದ ನಮ್ಮ ಅವಿವೇಕತನಕ್ಕೆ ಏನನ್ನಬೇಕೋ ತಿಳಿಯದು! ಒಟ್ಟಾರೆಯಾಗಿ ನಾಳೆ ಶಾಲೆಯಲ್ಲಿ ಕ್ರಿಸ್ಮಸ್ ರಜೆ ಹೇಗೆ ಕಳೆದಿರಿ? ಎಂಬ ಟೀಚರ್ ನ ಸಹಜವಾದ ಪ್ರಶ್ನೆಗೆ, ನಾಲ್ಕು ಜನರಿಗೆ ನಲವತ್ತು ರೀತಿಯಲ್ಲಿ ಹೇಳಲು, ಸ್ವಲ್ಪ ವಿಷಯ ಸಿಕ್ಕಿದ ಹಾಗಾಯಿತಲ್ಲವೇ? "ಇಲಿ ಹೋಯಿತೆಂದರೆ, ಹುಲಿ ಹೋಯಿತೆನ್ನುವುದು" ತೀರಾ ಸಾಮಾನ್ಯ! ಆದರೆ ಇಲ್ಲಿ ಹುಲಿಯ ಹೆಜ್ಜೆಯನ್ನೇ ನೋಡಿದ ನಾವು, "ಹುಲಿಯನ್ನೇ ನೋಡಿದ್ದೇವೆ" ಎಂದರೆ ಉತ್ಪ್ರೇಕ್ಷೆಯೆನಿಸುವುದಿಲ್ಲ ಬಿಡಿ.
      ಅಂದಹಾಗೆ ಈ ನಮ್ಮ ಕೊಪ್ಪರಿಗೆಯ ಬೆಲ್ಲದ ರುಚಿಯು ನಮ್ಮ ಮಲೆನಾಡಿಗರ ಮಾತಿನಷ್ಟೇ ಸಿಹಿ. ಯಾವುದೇ ಕ್ಲಿಷ್ಟವಾದ ಕೆಲಸವನ್ನು ನಿರಾಯಾಸವಾಗಿ ಮಾಡಬೇಕೆಂದರೆ ಅದನ್ನು ಸಂಭ್ರಮದಿಂದ ಮಾಡು. ಅದಕ್ಕೆ ನಮ್ಮ ಆಲೆಮನೆಯೇ ಜ್ವಲಂತ ಸಾಕ್ಷಿ. ಆಲೆಮನೆಗೆ, ತಯಾರಿಯು ಬಹುದಿನಗಳಿಂದ ಪ್ರಾರಂಭವಾಗುತ್ತದೆ ಹಾಗು ಅದೊಂದು ಬಹುಜನರ ಸಹಕಾರದಿಂದ ಸಾಕಾರಗೊಳ್ಳುವಂತಹ ಪ್ರಕ್ರಿಯೆ. ಇಂತಹದೊಂದು ಕೆಲಸ ವರ್ಷದಲ್ಲಿ ಒಮ್ಮೆ ಮಾಡಿದರೂ, ಒಗ್ಗಟ್ಟಿನಲ್ಲಿ ಇರುವ ಬಲ ಹಾಗು ಒಗ್ಗೊಡಿ ಮಾಡಿದ ಕೆಲಸದಲ್ಲಿ ಸಿಗುವ ಸಂತೋಷದ ಪಾಠವನ್ನು ಎಲ್ಲರಿಗೂ ಕಲಿಸುತ್ತದೆ. ಬುದ್ದಿ ಜೀವಿಗಳಾದ ನಾವು ನಮ್ಮನ್ನು ನಾವು ಅರಿತು ಬದುಕುವುದು ಎಷ್ಟು ಮುಖ್ಯವೋ ಸಮಾಜಮುಖಿಯಾಗಿ ಬದುಕುವುದೂ ಅಷ್ಟೇ ಮುಖ್ಯ. ಇಂತಹ ಕೆಲಸಗಳಲ್ಲಿ ತೊಡಗುವುದರಿಂದ ಎಲ್ಲರ ಜೊತೆ ಕಲೆತು ಬೆರೆತು ಬದುಕುವುದು ಸಹಜವಾಗಿಯೇ ಬಂದುಬಿಡುತ್ತದೆ. ಪ್ರಕೃತಿಯ ಮದ್ಯೆ, ಯಾವದೇ ಆಧುನಿಕ ಸವಲತ್ತುಗಳನ್ನು ಬಳಸದೆ, ಜೀವನ ಕಟ್ಟಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾದರೂ ಮಲೆನಾಡಿಗರು ತಮ್ಮ ಒಗ್ಗಟ್ಟಿನಿಂದಲೂ, ಕಾರ್ಯ ಕ್ಷಮತೆಯಿಂದಲೂ ಬದುಕಿ ತೋರಿಸಿದ್ದಾರೆ.

       ಅಂದಿನ ನಮ್ಮ ಅಭ್ಯಂಗನ ಸ್ನಾನವು ಸ್ಥಳಬದಲಾವಣೆಯನ್ನು ಕಂಡಿತ್ತು. ನಾವೆಲ್ಲರೂ ಕಸಿನ್ಸ್ ಸೇರಿ 'ನಿಂಬೆಕೆರೆ' ಯಲ್ಲಿ ಎಮ್ಮೆಗಳು ಬಿದ್ದು ಹೊರಳಾಡಿದ ರೀತಿ ನಮ್ಮ ಆಸೆಯನ್ನು ತೀರಿಸಿಕೊಳ್ಳುತ್ತಿದ್ದೆವು. ಚಳಿಗಾಲದಲ್ಲಿ ತೋಟದ ಕೆರೆಯ ನೀರು ಕೊರೆಯುವ ಹಿಮದ ತಂಡಿಗೇನು ಕಡಿಮೆಯಿಲ್ಲವಾದ್ದರಿಂದ ಸೂರ್ಯ ನೆತ್ತಿಯ ಮೇಲೆ ಬಂದನಂತರವೇ ತೆರೆಳಿದ್ದೆವು. ನೀರಲ್ಲಿ ಆಟ, 'ಜಿಯಾ ಜಲೇ ಜಾನ್ ಜಲೇ' ಹಾಡು ಅದಕ್ಕೆ ಪ್ರೀತಿ ಜಿಂಟಾ ಅನುಕರಣೆಯ ನೃತ್ಯ ಜೋರಾಗಿ ನಡೆಯಲು ನಮಗೆ ಸಮಯದ ಅರಿವೇ ಆಗಲಿಲ್ಲ. ಕೊನೆಗೆ, ನೋಡುವಷ್ಟು ನೋಡಿ! ನಮ್ಮನ್ನು ಅಲ್ಲಿಂದ ಎಬ್ಬಿಸಲು ದೊಡ್ಡವರ ಮುಳ್ಳಿನ ಕೋಲೇ ಬರಬೇಕಾಯಿತು. 
       ಪಂಕ್ತಿ ಊಟವಾದ ನಂತರ ಎಲ್ಲರದೂ ಹೊರಡುವ ಗಡಿಬಿಡಿ. ಒಬ್ಬೊಬ್ಬರೇ ಹೊರಡುವ ತಯಾರಿಯಲ್ಲಿ ತೊಡಗಿದರು. ಲಾಸ್ಟ ಮಿನಿಟ್ ಪ್ಯಾಕಿಂಗ್ ನಲ್ಲಿ ನಿರತಳಾದ ನನಗೆ, "ಬ್ರೆಷ್ ಮತ್ತೆ ಸೋಪ್ ಬಾಕ್ಸ್ ಎಲ್ಲ ಹಾಕೊಂಡ್ಯ ನೋಡು, ಅದೇನೇನ್ ಎಲ್ಲೆಲ್ ಬಿಟ್ಟಿದ್ಯ ನೋಡ್ಕೊಂಡ್ ಬಾ ಒಂದ್ಸಲ. ಆಮೇಲೆ ಅದ್ ತರ್ಲಿಲ್ಲ ಇದ್ ಇಲ್ಲ ಅಂತ ಊರಿಗ್ ಹೋದ್ಮೇಲೆ ಅಳ್ಬೇಡ" ಎಂದು ಅಮ್ಮ ಎಚ್ಚರಿಸಿದಳು. ಪ್ರತಿಬಾರಿಯಂತೆ ಈ ಬಾರಿಯೂ ಅತ್ತೆ ಪ್ರೀತಿ ಇಂದ, 'ಹಪ್ಪಳ ಸಂಡಿಗೆ ಕವರ್, ಘಮ ಘಮ ತುಪ್ಪದ ಬಾಟಲಿಯನ್ನು ಕೊಟ್ಟರು'. ದೇವರ ಮುಂದೆ ಕೂರಿಸಿ ಅರಿಶಿನ ಕುಂಕುಮ ದುಡ್ಡು ಕೊಟ್ಟು ಒಳ್ಳೆದಾಗಲಿ ಎಂದು ಆಶೀರ್ವದಿಸಿದರು. ನಾವುಗಳು ದೊಡ್ಡವರ ಕಾಲಿಗೆ ನಮಸ್ಕರಿಸಿ, ಬ್ಯಾಗ್ಗಳನ್ನು ಅಂಗಳಕ್ಕೆ ತಂದು ಇಟ್ಟೆವು. ಅಷ್ಟರಲ್ಲಿ ಲಪ್ಪಿಯೂ ಊಟ ಮುಗಿಸಿ ಅಂಗಳಕ್ಕೆ ಬಂದಳು ಎಲೆ ಅಡಿಕೆ ಜಗಿಯುತ್ತಾ. "ಅದೆಂತಕೆ ಇಷ್ಟ್ ಬೇಗ ಹೊರ್ಟಿದ್ದು? ಶಾಲೆ ಶುರುನ?" ಎಂದಳು. ಅವಳಿಗೆ ಬೈ ಬೈ ಟೇಕ್ ಕೇರ್ ಹೇಳಿ ಎಲ್ಲರಿಗೂ ಬೈ ಹೇಳಿ ಹೊರಟೆವು. 


ಲಪ್ಪಿ ನಮ್ಮ ಬ್ಯಾಗ್ ಗಳನ್ನು ಸೊಂಟದಲ್ಲಿ ಚಚ್ಚಿಕೊಂಡು ಮುನ್ನೆಡೆಯುತ್ತ, "ಬೇಸ್ಗೆ ರಜೆ ಶುರುಆಗ್ತಿದಂಗೆ ಬನ್ನಿ ಮಾವನ್ ಮನಿಗೆ. ಆಗ್ ಆದ್ರೆ ತುಂಬಾ ದಿನ ಇರ್ಬೋದು. ಮುಂದಿನ ಸತಿ ಬರುವಾಗ್ ನಂಗೇನ್ ತರ್ತೀರಾ?" ಎಂದಳು ಪ್ರೀತಿಯಿಂದ. "ನಾನೇ ಬರ್ತೀನಲ ನಿಂಗೆ ಇನ್ ಏನ್ ಬೇಕೇ?" ಎಂದೆ ಅವಳನ್ನು ರೇಗಿಸಲು.  ದಾರಿಯಲ್ಲಿ ಚಿಕ್ ಮಾವನ ಮನೆ ಒಳ ಹೊಕ್ಕು ಅತ್ತೆಯ ಕೈ ಟೀ ಕುಡಿದು ಎಲ್ಲರಿಗೆ ಬೈ ಹೇಳಿ ಬಸ್ ಸ್ಟಾಂಡ್ ನ ಕಡೆ ಹೆಜ್ಜೆ ಹಾಕಿದೆವು. ಬಿಸಿಲು ಚುರುಕಾಗಿಯೇ ಇದ್ದರೂ ತೋಟದ ಒಳ ಹೊಕ್ಕ ನಮಗೆ ಅದರ ತೀವ್ರ್ಯತೆಯ ಅರಿವಾಗಲಿಲ್ಲ. ಲಪ್ಪಿಯು ನಮಗಿಂತಲೂ ಮುಂದೆ ಹೋಗಿ ಬಸ್ ಸ್ಟ್ಯಾಂಡಿನಲ್ಲಿ ಬ್ಯಾಗ್ ಗಳನ್ನು ಇಟ್ಟು ಅತ್ತ ಇತ್ತ ನೋಡುತ್ತಿದ್ದಳು. 'ಭಟ್ಟರಗಾಡಿ ಎಕ್ಸ್ಪ್ರೆಸ್'  ಕೊಲ್ಲೂರಿನಿಂದ ಬರಬೇಕಿತ್ತು. ನಮಗೆ ಸೀಟು ಸಿಗುವುದು ನಗರ ಬಂದಮೇಲೆಯೇ ಅಲ್ಲಿಯವರೆಗೂ ಸ್ಟ್ಯಾಂಡಿಂಗ್ ನಲ್ಲಿಯೇ ಹೋಗಬೇಕೆಂಬುದು ತಿಳಿದಿತ್ತು. 

ನಾವು ನಿಧಾನವಾಗಿ ಬಸ್ ಸ್ಟಾಂಡ್ ತಲುಪುವಷ್ಟರಲ್ಲಿ ಹಾರ್ನ್ ಮಾಡುತ್ತ ಭಟ್ಟರಗಾಡಿ ದೂರದ ತಿರುವಿನಲ್ಲಿ ಬರುವುದು ಕಾಣಿಸಿತು. ಲಪ್ಪಿ, ಕೈ ಅಡ್ಡ ಹಾಕಿ ಬಸ್ಸನ್ನು ನಿಲ್ಲಿಸಿ ಬ್ಯಾಗ್ ಗಳನ್ನು ಹತ್ತಿಸಿ ಕೊಟ್ಟು, 'ಹೋಗ್ಬನ್ನಿ' ಎಂದು ಬೀಳ್ಕೊಟ್ಟಳು. 
ಹೊಯ್! ಎಲ್ಲಿಗೆ?
ಶಿವಮೊಗ್ಗ, ಮೂರ್ ಸೀಟ್ .....



Comments

  1. This comment has been removed by the author.

    ReplyDelete
    Replies
    1. Good evening ma'am! Here is the abstract of the speech I told you about... The girl who was invited to speak in IIT Gandhinagar for an event, ma'am...
      Speaker: ARADHANA ANAND; Delhi Public School, Bangalore South, INDIA
      Abstract: This talk is about finding the value of sine 18 using a method based on Geometry
      and Quadratic equations. This result is described in Bhaskaracharyas Siddhanta Shiromani.
      The speaker then extends this method to find the value of sine 54 and also attempts to capture
      the result in verse form (in Sanskrit). The presentation is in Sanskrit (followed by an English
      translation). Ma'am, the talk can be seen here - https://youtu.be/mpZxVMUVCbY
      Also, I can *finally* reply to your blog posts through my blogger ID!



      Delete
    2. Yes nice to see ur blogger ID !
      Thank you so much for the insights and I sincerely appreciate your dedication and efforts in regards to Samskruta :)

      Delete
  2. Super 😀🙂
    Writting is osm do more like this all the best always

    ReplyDelete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "