"ಕೊಪ್ಪರಿಗೆಯ ಬೆಲ್ಲ" (4) - ಬಳುಕುವ ದಾರಿ ಭೂತನೊಣಿ ಏರಿ!

      


  ಬಳುಕುವ ದಾರಿ ಭೂತನೊಣಿ ಏರಿ!


   ಹೊಸನಗರದಿಂದ ಮುಂದೆ ಸಾಗುವ ರಸ್ತೆಯು ಅಂಕು ಡೊಂಕಾಗಿ ಬಳುಕುವ ಬಳ್ಳಿಯಂತೆ ಬೆಂಡಾಗಿದೆ. ದಟ್ಟ ಕಾನನದ ಮಧ್ಯೆ ದೂರದಲ್ಲಿ ಕಾಣುವ ಧೈತ್ಯಾಕಾರದ ಬೆಟ್ಟಗಳು, ಅದರ ಮಧ್ಯೆ ಕಾಳಿಂಗ ಸರ್ಪ ನಡೆದಂತಿರುವ ಟಾರ್ ರಸ್ತೆ ಅದರ ಮೇಲೆ ಬಸ್ಸು. ಇಳಿಜಾರಿನಲ್ಲಿ ಹರಿಯುವ ನೀರಿನಷ್ಟೇ ಸರಾಗವಾಗಿ ಚಲಿಸಿ, ಕಡಿದಾದ ಏರಿನಲ್ಲಿ ಒಂದಿಂಚೂ ದಾಟಲು ಕಷ್ಟ ಪಡುತ್ತಿದ್ದ ಬಸ್ಸಿನ ಹಾಗೂ ಒಳಗಿನ ಪ್ರಯಾಣಿಕರ ಪರಿಸ್ಥಿತಿ ಹೇಳತೀರದು. ಹಾಗೆಯೇ ಹೊಟ್ಟೆ ತೊಳಸುವುದು ಅಸಹಜವೇನಲ್ಲ ಬಿಡಿ!  
   ಮೂರು ತಾಸು ಬಸ್ಸಿನಲ್ಲಿ ಕೂತು ಬೋರ್ ಆದ ನಮಗೆ ‘ಭೂತನೋಣಿಯ ಏರು ಕಂಡಿದ್ದೇ, ಆದ ಆಯಾಸವೆಲ್ಲ ಮರೆಯುವಂತಾಗಿ ಇಳಿಯಲು ಸಜ್ಜಾಗಿ ಕೂತೆವು’. 

   ಈ ಜಾಗಕ್ಕೆ ಭೂತನೋಣಿ ಎಂದು ಏಕೆ ಕರೆಯುತ್ತಾರೆ? ಎಂದು ಹಿಂದೊಮ್ಮೆ ನನ್ನ ಮಾವನ್ನನ್ನು ಕೇಳಿದ್ದೆ, ಅವರು ಹೇಳಿದ ಕಥೆಯನ್ನು ನೆನೆಸಿಕೊಂಡರೆ, ಅಯ್ಯೋ! ನಮ್ಮ ಬಸ್ಸು ಈ ಜಾಗವನ್ನು ದಾಟಿದರೆ ಸಾಕಪ್ಪಾ ಎಂದೆನಿಸುತ್ತದೆ. ಈ ಭೂತನೋಣಿಯ ಏರು ಎಷ್ಟು ಕಡಿದಾಗಿತ್ತೆಂದರೆ ಸಮಾಗೋಡಿನ "ನಲ್ಲಿ ಗುಡ್ಡದ" ಮೇಲೆ ಕೂತರೆ ಈ ಏರಿನಿಂದ ಇಳಿಯುವ ಬಸ್ಸಿನ ಹೆಡ್ಲೈಟ್ ತೋರುತ್ತಿತ್ತು. ಇಂತಹ ಏರಿನಲ್ಲಿ ಬಸ್ಸು ಓಡಿಸುವುದು ಚಾಲಕನ ಚಾಲನೆಯ ಪರೀಕ್ಷೆಯೆಂದೇ ಹೇಳಬಹುದು. ಹಿಂದೊಮ್ಮೆ ಸೈಜ್ಗಲ್ಲು ಹೊತ್ತ ಲಾರಿಯು ಇಲ್ಲಿನ ಏರು ರಸ್ತೆಯನ್ನು ಹತ್ತುವಾಗ ಹಿಂಬದಿ ಇಂದ ಯಾರೋ ಆ  ಲಾರಿಯನ್ನು ಹಿಡಿದು ಎಳೆದಂತೆ ಚಾಲಕನಿಗೆ ಭಾಸವಾಗಿ ಅವನು ಎಷ್ಟೇ ಪ್ರಯತ್ನಿಸಿದರೂ ಲೇಶ ಮಾತ್ರ ಸಹ ಗಾಡಿಯನ್ನು ಮುಂದೆ ನಡೆಸಲು ಆಗಲಿಲ್ಲ, ರಸ್ತೆಯ ಏರು ಲಾರಿಯನ್ನು ಮತ್ತೂ ಹಿಂದಕ್ಕೆ ತಳ್ಳುತ್ತಾ ಬಂದಿತ್ತು. ಆಗ ಚಾಲಕನಿಗೆ ಒಂದು ಅಶರೀರ ವಾಣಿಯು ಕೇಳಲು, “ನಾನು ಭೂತರಾಯ.... ನನಗೆ ಇಲ್ಲಿ ಒಂದು ನೆಲೆ ಕಟ್ಟಿಕೊಡು, ಇತ್ತ ಪ್ರಯಾಣಿಸುವ ಜನರು ನನಗೆ ಹಣ್ಣು ಕಾಯಿ ಮಾಡಿಸಿ ಮುಂದೆ ಹೊಗಲಿ, ಬಂದ ಜನರನ್ನೆಲ್ಲ ಹರಸುತ್ತೆನೆ” ಎನ್ನಲು, ಚಾಲಕನು ತಾನು ಸಾಗಿಸುತ್ತಿದ್ದ ಸೈಜ್ಗಲ್ಲುಗಳನ್ನೇ ಬಳಸಿ ಒಂದು ಪುಟ್ಟ ಗುಡಿಯೊಂದನ್ನು ಕಟ್ಟಿಕೊಟ್ಟು ಗಾಡಿ ಹೊರಡಿಸಲು ಅನುವು ಮಾಡಲು, ಆಶ್ಚರ್ಯ ರೀತಿಯಲಿ ಗಾಡಿಯು ಸಲೀಸಾಗಿ ಆ ಏರನ್ನು ಹತ್ತಿ ಹೊಯಿತು. ಅಂದಿನಿಂದ  ಆ ಸುತ್ತ ಮುತ್ತಲ ಊರಿನಲ್ಲಿ ಯಾವುದೇ ಶುಭಕಾರ್ಯ ಮದುವೆ ಮುಂಜಿ ಇತ್ಯಾದಿಗಳು ನಡೆಯುವ ಮುನ್ನ ಆ ಭೂತರಾಯನ ಗುಡಿಯಲ್ಲಿ ಕಾಯಿ ಒಡೆಯುವ  ಪದ್ದತಿ ಬಳಕೆಯಲ್ಲಿದೆ.

Comments

  1. ತುಂಬಾ ಚೆನ್ನಾಗಿದೆ .ಬಾಲ್ಯದ ನೆನಪುಗಳು ಮರುಕಳಿಸಿದೆ.devagange ದೊಡ್ಡಮ್ಮ,ಯಬಾಗೊಡು ಹಣ್ಣು ಮಂಡೆ ದೊಡ್ಡಮ್ಮ,ಸಮಗೊಡು ದೊಡ್ಡಮ್ಮನ ಜೊತೆ ನಡೆದು ಕೊಂಡು ಹೋಗುವಾಗ ಕಲ್ಲೊಂದನ್ನು ಎತ್ತಿ ಹಾಕಿ ಕೈ ಮುಗಿದು ಮುಂದೆ ನಡೆದು ಸಮಾಗೊಡು ಮನೆಗೆ ಹೋಗಿದ್ದು ಓಲಿ ಛತ್ರಿ ಹಿಡಿದು ಸಂಭ್ರಮ ಪಟ್ಟಿದ್ದು ಒಂದರಂತೆ ಒಂದು ನೆನಪಿನ ಸುರುಳಿ ಬಿಚ್ಚುತ್ತಿದೆ

    ReplyDelete
    Replies
    1. Yes indeed 😊 may I know who is this?
      Thank you

      Delete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "