"ಕೊಪ್ಪರಿಗೆಯ ಬೆಲ್ಲ" (14) - 'ಪೂರ್ವ ಸಿದ್ಧತೆ'
'ಪೂರ್ವ ಸಿದ್ಧತೆ'
ಆಲೆಮನೆಯ ಸಂಭ್ರಮಕ್ಕೆ ಇನ್ನು ಒಂದೇ ದಿನ ಬಾಕಿ ಇರಲು, ನಮ್ಮ ಕಾಲು ನೆಲದ ಮೇಲೆ ನಿಂತಿರಲಿಲ್ಲ. ಇಷ್ಟುದಿನ ನಮ್ಮ ಓಡಾಟ ಮನೆಯ ಅಂಗಳದಿಂದ ಕೊಟ್ಟಿಗೆಯ ತನಕವಿದ್ದದ್ದು ಈಗ ಆಲೆಮನೆಯ ಗದ್ದೆಯ ತನಕ ಮುಂದುವರೆಯಿತು.
ನೋಡಿದವರಿಗೆ ಆಲೆಮನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಇವರುಗಳೇ ನೋಡಿಕೊಳ್ಳುತ್ತಿದ್ದಾರೆ! ಎನ್ನುವ ರೀತಿ, ಪ್ರತಿಯೊಂದನ್ನು ಕುತೂಹಲದಿಂದ ನೋಡಿ ಪರಿಶೀಲಿಸುತ್ತಿದ್ದೆವು. ಹೋಗುತ್ತಾ ಬರುತ್ತಾ ಅಲ್ಲಿ ರಾಶಿ ಹಾಕಿರುವ ಕಬ್ಬಿನಲ್ಲಿ ಕಪ್ಪುಕೆಂಪು ಬಣ್ಣದ ದಾಸ್ ಕಬ್ಬನ್ನು ಹಾರಿಸಿಕೊಂಡು ಓಡುತ್ತಿದ್ದೆವು. 'ಆಲೆಕಣೆಯನ್ನು ನೇರಳೆಮನೆಯಿಂದ' ಬಾಡಿಗೆಗೆ ತೆಗೆದುಕೊಂಡಿದ್ದು ಅದು ಅಂದು ಮುಂಜಾನೆಯೇ ಬಂದು ಅದರ ನಿರ್ದಿಷ್ಟ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿತ್ತು.
ಅದರ ಮುಂದೆ ತೋಡಿದ ಹೊಂಡದಲ್ಲಿ ಕಬ್ಬಿನ ಹಾಲನ್ನು ತುಂಬಿಸಿಕೊಳ್ಳಲು ಒಂದು ದೊಡ್ಡ ಕಡಾಯಿಯನ್ನು ಕೂರಿಸಿ ಅದಕ್ಕೆ ಹಾಲನ್ನು ಸಾಗಿಸುವ ವದಿಗೆಯನ್ನು ಸೇರಿಸಿದ್ದರು. ನಾವುಗಳು ಬಿಸಿಲಿನಲ್ಲಿ ಅಂದಿನ 'ಷೋಸ್ ಸ್ಟಾಪರ್ಗಳಾದ ಕೋಣಗಳ' ಬರುವಿಕೆಯನ್ನೇ ಕಾಯುತ್ತಾ, ಕೋಣಗಳ ಬಣ್ಣವೇ ಆಗಿ ಹೋಗಿದ್ದೆವು!
ಆಲೆಮನೆ ಎಂದರೆ 'ವಿಶೇಷದಮನೆ' ಎಂದೇ ಪರಿಗಣಿಸಲಾಗುತ್ತಿತ್ತು. ಊರಿನವರೆಲ್ಲ ಬಂದು ಅಷ್ಟೇ ಸಂತೋಷದಿಂದ ಭಾಗಿಯಾಗುತ್ತಿದ್ದರು. ಅದರಂತೆಯೇ 'ಆಲೆಮನೆಯ ಹೇಳಿಕೆಯು' ಸಹ ಅಷ್ಟೇ ಮಹತ್ವವನ್ನು ಪಡೆದಿತ್ತು. ಪಕ್ಕದ ಊರುಗಳಾದ ಯಬಗೋಡು, ಮತ್ತಿಮನೆ, ಕುಂದ್ಗಲ್ ಗೆ ಹೇಳಿಕೆ ಈಗಾಗಲೇ ಹೋಗಿತ್ತು. ಸಮಗೋಡಿನ ಮನೆಗಳಿಗೆ ಹೇಳಿಕೆ ಹೇಳಲು ನಾವುಗಳೇ ಹೋಗುತ್ತೇವೆ ಎಂದು ಸಂಭ್ರಮದಿಂದ ಹೊರಟು, ಮೊದಲು ಹೋಗಿದ್ದೇ 'ಭೀಮ ಭಟ್ಟರ ಮನೆಗೆ'! ಅವರ ಮೊಮ್ಮಕ್ಕಳು, ಆಲೆಮನೆಗೆ ಬಂದು ಅಲ್ಲಿ ನಮ್ಮ ಓಡಾಟವನ್ನು ನೋಡಿದರೆ ಅದು ನಮ್ಮ ಕಿರೀಟಕ್ಕೆ ಪ್ರತಿಷ್ಠೆಯೆಂಬ ಗರಿ ಸಿಕ್ಕಿಸಿದಂತೆ ಅಲ್ಲವೇ?! ಮನೆಗೆ ತೆರಳಿದ ನಮಗೆ, ಭರ್ಜರಿ ಸತ್ಕಾರವೇ ದೊರೆಯಿತು. ನಾನು ಅಂದುಕೊಂಡಂತೆ ಅಂದು "ನಲ್ಲಿ ಗುಡ್ಡದಲ್ಲಿ ಶುಕ್ರನಿಗೆ ದೊರೆತ ದಿವ್ಯ ದೆವ್ವ ದರ್ಶನವನ್ನು" ನಮ್ಮ ಮುಂದೆ ಎತ್ತಲಿಲ್ಲ. ಮಕ್ಕಳ ಮುಂದೆ ದೆವ್ವ ಭೂತಗಳ ವಿಷಯ ಸಲ್ಲ ಎಂಬ ಆಲೋಚನೆ ಇದ್ದಿರಬಹುದು. ನಾವು ಹೊರಟು ಬರುತ್ತಾ, "ನಾಳೆ ಆಲೆಮನೆಗೆ ಬನ್ನಿ ಬರ್ತಾ ಕ್ಯಾನ್ ತಗೊಂಡ್ ಬನ್ನಿ" ಎಂದು ಹಿರಿಯರು ಹೇಳಿಕೊಟ್ಟ ಡೈಲಾಗ್ ಅನ್ನು ಬಿಟ್ಟು ವಾಪಾಸಾದೆವು.
ನಾವು ಮನೆಗೆ ಬರುವ ಹೊತ್ತಿಗೆ ಒಂದು ಜೋಡಿ ದಷ್ಟ ಪುಷ್ಟವಾದ ಕೋಣಗಳು ಆಲೆಮನೆಯ ಬಳಿ ಹುಲ್ಲು ಮೇಯುತ್ತಾ ಮರುದಿನದ ಕೆಲಸಕ್ಕೆ ತಮ್ಮನ್ನು ಅಣಿ ಮಾಡಿಕೊಳ್ಳುತ್ತಿದ್ದವು. ಅಲ್ಲೇ ಪಕ್ಕದಲ್ಲಿ ಮಣ್ಣಿನ ಒಲೆಯಲ್ಲಿ ಬೆಂಕಿ ಹೊತ್ತಿಸಿ ಮಧ್ಯಾಹ್ನದ ಭೋಜನಕ್ಕೆ ಕೋಣದ ಜೊತೆಗೆ ಬಂದ ಇಬ್ಬರು ತಯಾರಿನಡೆಸುತ್ತಿದ್ದುದು ಕಣ್ಣಿಗೆ ಬಿತ್ತು. ನಮಗೆ ಹೊಟ್ಟೆಯ ಹಸಿವು ಮರೆತುಹೋಗಿದ್ದರೂ, ಮಣ್ಣಿನ ಒಲೆಯಲ್ಲಿ ತಯಾರಾಗುತ್ತಿದ್ದ ಆಲೂಗಡ್ಡೆ ಈರುಳ್ಳಿ ಹುಳಿಯ ಘಮಕ್ಕೆ, ತಟ್ಟೆ ತೆಗೆದುಕೊಂಡು ನೇರವಾಗಿ ಒಲೆಯ ಬಳಿ ಕೂರುವ ಮನಸ್ಸಾಯಿತು. ಅಷ್ಟರಲ್ಲಿ ಒಳಗಿನಿಂದ "ಬರ್ರೋ ಮಕ್ಳ ಊಟಕ್ಕಾಯಿತು" ಎಂಬ ಧ್ವನಿ ಬರಲು, ಇಂದು ಸರಿಯಾದ ಸಮಯಕ್ಕೆ ಹೋಗದಿದ್ದರೆ ಅವರ ಪಿತ್ತ ನೆತ್ತಿಗೆ ಏರುತ್ತದೆಯೆಂದು ತಡಮಾಡದೆ ಎಲ್ಲರೂ ಸಾಲಾಗಿ ಬಾಳೆ ಎಲೆಯ ಮುಂದೆ ಕುಳಿತೆವು.
ಊಟವಾದ ನಂತರ ಬಹು ಮುಖ್ಯವಾದ ಕೆಲಸವೊಂದಿತ್ತು. ಹೇಳಬೇಕೆಂದರೆ, ಇದು ಆಲೆಮನೆಗೆ ನಮ್ಮ ತಯಾರಿ!
ತೋಟದಲ್ಲಿ ಬಾಳೆಮರ ಕಡಿಯುವುದನ್ನೇ ಕಾಯುತ್ತಿದ್ದ ನಮಗೆ, ಸುದ್ದಿ ತಿಳುಯುತ್ತಿದ್ದಂತೆ ತೋಟಕ್ಕೆ ಓಡಿ ಬಾಳೆಮರವನ್ನು ಅದರ ಅಂತಿಮ ಯಾತ್ರೆಗೆ ಕರೆದುಕೊಂಡುಹೋಗುವಂತೆ ನಾಲ್ಕು ಜನ ಹೊತ್ತುಕೊಂಡು ಬಂದು ಗದ್ದೆ ಬುಡದಲ್ಲಿ ಹಾಕಿ ಅದರ 'ಆಟೋಪ್ಸಿಗೆ' ಸುತ್ತಲೂ ಕೂತೆವು. ಬಾಳೆಕಂಬದ ಮೇಲ್ಪದರವನ್ನು ಚೆನ್ನಾಗಿ ಸುಲಿದು ಒಳಗಿರುವ ಬಾಳೆದಿಂಡನ್ನು ಪಡೆದುಕೊಳ್ಳುವುದೇ ಅದರ ಉದ್ದೇಶ. ಬಾಳೆದಿಂಡಿನ ಪಲ್ಯಕ್ಕಲ್ಲ! ಒಂದು ವಿಶೇಷವಾದ ಡೆಸರ್ಟ್ಗಾಗಿ! ಬಾಳೆದಿಂಡನ್ನು ಅಮ್ಮನಿಗೆ ತಂದು ಕೊಟ್ಟು ಅದನ್ನು ಚಕ್ರ ಚಕ್ರ ಆಕಾರದಲ್ಲಿ ಕತ್ತರಿಸಿ ಕೊಡಲು ಹೇಳಿದೆವು. ನಂತರ ಬಾಳೆಮರದ ನಾರನ್ನು ದಬ್ಬಣದಲ್ಲಿ ಪೋಣಿಸಿ ಒಂದೊಂದಾಗೆ ಹೆಚ್ಚಿದ ಚಕ್ರಗಳನ್ನು ಸುರಿದು ನಾಳೆಗಾಗಿ ಅದನ್ನು ಎತ್ತಿಟ್ಟುಕೊಂಡೆವು.
ಅಂದು ರಾತ್ರಿ ನಮಗೆ ಮಲುಗುವುದೇ ಬೇಡವೆನಿಸಿದರೂ, ಕೊಪ್ಪರಿಗೆಯ ಬೆಲ್ಲವನ್ನು ಕೊನೆಯ ಬಾರಿ ಕನಸಿನಲ್ಲಿ ಕಾಣುವ ಸಲುವಾಗಿ, ಎಲ್ಲರೂ ಜಗಲಿಯಲ್ಲಿ ಉದ್ದಕ್ಕೆ ಹಾಸಿದ ಹಾಸಿಗೆಯನ್ನು ಸೇರಿ ನಿದ್ದೆ ಹೋದೆವು.....
Good afternoon ma'am! This is Sreemayee!
ReplyDeleteYour article is very beautiful ma'am, has a very rustic feel. Also, very interesting to note that your blogger profile says Ikshvaku while your article considerably mentions sugarcane! 😁 Ma'am, here is a Sanskrit course series which is very helpful... IIT Kharagpur's Sanskrit professor Mrs Anuradha Choudhury has explained some concepts very well. They are very easy to understand... You can find it here - https//www.youtube.com/playlist?list=PLbRMhDVUMngfYG2GVf2bQnIgsI0Y923g3
Also ma'am, I have a blog where I post my Sanskrit writings specifically - vyakaranamwithvaidehi.blogspot.com. 3rd August this year (ShrAvaNa pUrNimA) is international Sanskrit day :)
जयतु भारतम् जयतु संस्कृतम्!
Ma'am, actually I was going to post this on your previous article 😁 can't read Kannada but Google helped!
DeleteThanks a lot dear Sreemayee :)
DeleteOh! is it? I din't know about it. Thanks for enlightening me.
You have a follower in me! good luck..
Thankyou so much ma'am! Also, is this about the annual festival when sugarcane juice is extracted without industrial machinery to make jaggery?
DeleteYes.. alemane :)
Delete