"ಕೊಪ್ಪರಿಗೆಯ ಬೆಲ್ಲ" (17) - ಅಯ್ಯೋ!...ರಜೆ ಮುಗೀತು...
ಅಯ್ಯೋ!...ರಜೆ ಮುಗೀತು... ಕಣ್ಣರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಕ್ರಿಸ್ಮಸ್ ರಜೆ ಮುಗಿದಿತ್ತು. ಇಷ್ಟು ಬೇಗ ಸಮಯ ಕಳೆದದ್ದು ಬೇಜಾರೆನಿಸಿದರೂ, ಒಂದು ನಿಮಿಷವನ್ನೂ ವ್ಯರ್ಥಮಾಡದೆ ಕಳೆದ ಒಂದೊಂದು ದಿನವೂ ನಮಗೆ ಅಭೂತಪೂರ್ವವಾದ ಆನಂದವನ್ನು ಕೊಟ್ಟಿದ್ದರಿಂದ, ಈ ರಜೆಯು ಒಂದು ರೀತಿಯ ಸಾರ್ಥಕತೆಯನ್ನು ಕೊಟ್ಟಿತ್ತು. ನಮ್ಮ ಕಮ್ಫರ್ಟ್ ಝೋನ್ ಅನ್ನು ದಾಟಿ, ಹಿಂದೆ ಕೈಗೊಳ್ಳದ ಅಡ್ವೆಂಚರ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೆವು. ಅದಕ್ಕೆ ಕಳಶವಿಟ್ಟಂತೆ ಆದ ಹುಲಿಯ ಹೆಜ್ಜೆಯ ದರ್ಶನ, "ಎಲೆ ಮಾನವ ಪ್ರಕೃತಿಯ ಮುಂದೆ ನೀನು ನಶ್ವರ" ಎಂದು ತನ್ನದೇ ರೀತಿಯಲ್ಲಿ ಪ್ರದರ್ಶಿಸಿದಂತಿತ್ತು. ಆ ಘಳಿಗೆಯಲ್ಲಿ, "ಇದೇ ನಮ್ಮ ಜೀವನದ ಕೊನೆಯ ಕ್ರಿಸ್ಮಸ್ ರಜೆ" ಎಂದು ಈ ಪುಕ್ಕಲ ಮನಸ್ಸು ನಿರಾಯಾಸವಾಗಿ ಒಪ್ಪಿಕೊಂಡಿದ್ದ ನೆನೆದರೆ ಮೈ ರೋಮಾಂಚನವಾಗದೆ ಇರಲಾರದು. ಹೇಗೆ ಕಾಡು ಮೇಡು ಸಂಚಾರಿಯಾಗಿ, ತೋಟ ಗದ್ದೆಗಳಲ್ಲಿ ಓಟಗಾರರಾಗಿ, ಹಣ್ಣಿನ ಮರಗಳ ಭಕ್ಷಕರಾಗಿ, ಗುಡ್ಡಕ್ಕೆ ಬೆಂಕಿ ಇಟ್ಟ ಕೊಳ್ಳಿ ದೆವ್ವವಾಗಿ ಮೆರೆದ ನಮ್ಮ ಅವಿವೇಕತನಕ್ಕೆ ಏನನ್ನಬೇಕೋ ತಿಳಿಯದು! ಒಟ್ಟಾರೆಯಾಗಿ ನಾಳೆ ಶಾಲೆಯಲ್ಲಿ ಕ್ರಿಸ್ಮಸ್ ರಜೆ ಹೇಗೆ ಕಳೆದಿರಿ? ಎಂಬ ಟೀಚರ್ ನ ಸಹಜವಾದ ಪ್ರಶ್ನೆಗೆ, ನಾಲ್ಕು ಜನರ...